•   ಡಾ. ಆರ್.ವಿ. ಭಂಡಾರಿಯವರ ಕನಸನ್ನು ನನಸಾಗಿಸಲು ಮತ್ತು ಅವರ ಸದಾಶಯವನ್ನು ಮುಂದುವರಿಸಲು.
  •   ಜಾತಿವಾದ ಮತ್ತು ಕೋಮುವಾದವನ್ನು ಸಂಘಟನಾತ್ಮಕವಾಗಿ ಎದುರಿಸಲು.
  •   ಪ್ರಭುತ್ವವು ಸರ್ವಾಧಿಕಾರಿ ಆದಾಗ, ದೇಶದ ಸಾರ್ವಭೌಮತೆಗೆ ಕಂಟಕಪ್ರಾಯವಾದಾಗ ಪ್ರಬಲವಾದ ಜನತಾ ಸಾಂಸ್ಕೃತಿಕ ಚಳುವಳಿ ಕಟ್ಟಲು.
  •  ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಿ, ಅಭಿವೃದ್ಧಿಗೊಳಿಸಲು ಅಗತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು.
  • ಧಾರ್ಮಿಕ ಮೂಲಭೂತವಾದ ಕಂದಾಚಾರ, ಕೋಮುವಾದ, ಜಾತಿವಾದದಂತಹ ವಿಭಜನಕಾರಿ ವಿಚಾರ ಮತ್ತು ಶಕ್ತಿಗಳ ವಿರುದ್ಧ ವೈಚಾರಿಕ ಸಮರ ನಡೆಸಲು.
  • ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡಲು.
  • ಲೇಖಕರು, ಜಾನಪದ ತಜ್ಞರು, ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಮತ್ತು ಆರ್ಥಿಕ ಸಹಾಯವನ್ನಿತ್ತು ಪ್ರೋತ್ಸಾಹಿಸುವ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯಲು.
  • ಅಸ್ಪೃಶ್ಯತೆ, ಮೌಢ್ಯತೆ, ಅಸಮಾನತೆ, ವಿಧವೆಯರ ಸಮಸ್ಯೆ, ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವಾದ ಯುವ ಲೇಖಕರು, ಚಿಂತಕರನ್ನು ತರಬೇತುಗೊಳಿಸಲು.
  • ಸಮಾಜ ವಿಜ್ಞಾನ ಅಧ್ಯಯನ, ಸಂಸ್ಕೃತಿ ಅಧ್ಯಯನಕ್ಕಾಗಿ ಸುಸಜ್ಜಿತ ಗ್ರಂಥಾಲಯವನ್ನು ತೆರೆಯಲು.
  • ಜಿಲ್ಲೆಯ ಆಥರ್ಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಕುರಿತು ಅಧ್ಯಯನ ನಡೆಸಲು, ವಿದ್ವಾಂಸರ ಕೂಟ (ಈಜಟಟಠತಿಠಿ) ಸ್ಥಾಪಿಸಲು.
  • ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯತೆಯ ಅಧ್ಯಯನ ನಡೆಸಿ ಅದನ್ನು ಹೊರನಾಡಿಗೆ ಪರಿಚಯಿಸಲು.
  • ಉತ್ತರಕನ್ನಡ ಜಿಲ್ಲೆಯೊಳಗಿನ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯವಾದ ಯೋಜನೆ ಸಿದ್ಧಪಡಿಸಲು.
  • ಟ್ರಸ್ಟನ ಉದ್ದೇಶಗಳ ಈಡೇರಿಕೆಗೆ ಸಭೆ, ಮೆರವಣಿಗೆ, ವಿಚಾರ ಸಂಕಿರಣ, ಅಧ್ಯಯನ ಶಿಬಿರ, ಕಲಾಜಾಥಾ, ಜಾನಪದ ಕಲಾಪ್ರದರ್ಶನ, ಲಲಿತಕಲಾ ಪ್ರದರ್ಶನ, ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು.
  • ಜಿಲ್ಲೆಯ ಸಮೃದ್ಧವಾಗಿರುವ ಜಾನಪದ ಕಣಜವನ್ನು ವೈಜ್ಞಾನಿಕವಾಗಿ ತೆರೆಯಲು ಮತ್ತು ಅಧ್ಯಯನ ಮಾಡಲು.
  • ಜಿಲ್ಲೆಯ ನೈಸಗರ್ಿಕ ಪರಿಸರ ಮತ್ತು ಅಭಿವೃದ್ಧಿ ಯೋಜನೆಯ ಕುರಿತು ವರದಿ ಸಿದ್ಧಪಡಿಸಿ ಸಂಬಂಧಪಟ್ಟವರ ಗಮನ ಸೆಳೆಯಲು.
  • ಯಕ್ಷಗಾನ, ತಾಳಮದ್ದಳೆಯಂತಹ ಕಲೆಯನ್ನು ಮತ್ತು ಕಲಾವಿದರನ್ನು ಗುರುತಿಸಿ, ಸನ್ಮಾನಿಸಿ ಪ್ರೋತ್ಸಾಹಿಸಲು.
  • ಟ್ರಸ್ಟನ ಉದ್ದೇಶಗಳ ಈಡೇರಿಕೆಗಾಗಿ ರಂಗಮಂದಿರ, ಸಭಾಭವನ ನಿಮರ್ಿಸಲು.
  • ಜಿಲ್ಲೆಯ ಅಧ್ಯಯನಕ್ಕೆ ಮತ್ತು ಪ್ರವಾಸಿ ತಾಣವನ್ನು ನೋಡಲು ಬರುವವರಿಗೆ ಮಾರ್ಗದರ್ಶನ ಕೇಂದ್ರವನ್ನು ತೆರೆಯಲು ಹಾಗೂ ಅವರ ವಸತಿಗಾಗಿ ಅತಿಥಿಗೃಹ ನಿಮರ್ಿಸಲು.
  • ಟ್ರಸ್ಟನ ಉದ್ದೇಶಗಳ ಈಡೇರಿಕೆಗೆ ಪೂರಕವಾದ ಫೋನ್, ಕಂಪ್ಯೂಟರ್, ಫ್ಯಾಕ್ಸ್, ಅಂತರಜಾಲ, ವೆಬ್ಸೈಟ್ ಮತ್ತು ವಾಹನ ಹೊಂದಲು.
  • ರಂಗಭೂಮಿ, ಪರಿಸರ, ಸಾಹಿತ್ಯ, ಜಾನಪದ ಮೊದಲಾದ ವಿಷಯದ ಮೇಲೆ ಡಿಪ್ಲೋಮಾ, ಎಂ.ಫಿಲ್. ಪಿಎಚ್.ಡಿ. ಅಧ್ಯಯನಕ್ಕಾಗಿ ಶೈಕ್ಷಣಿಕ ಕೇಂದ್ರ ಸ್ಥಾಪಿಸಲು.
  • ಕನ್ನಡ ಕೃತಿಗಳ ರಚನೆಯಲ್ಲಿ ತೊಡಗಿರುವ ಲೇಖಕರನ್ನು ಪ್ರೋತ್ಸಾಹಿಸಲು, ತರಬೇತಿ ಶಿಬಿರಗಳನ್ನು ಏರ್ಪಡಿಸಲು ಮತ್ತು ಅವರ ಕೃತಿಗಳನ್ನು ಪ್ರಕಟಿಸಲು.
  • ಡಾ. ಆರ್.ವಿ. ಭಂಡಾರಿಯವರ ಪ್ರಶಸ್ತಿ, ಪುಸ್ತಕ ಹಾಗೂ ಅವರು ಬಳಸಿದ ವಸ್ತುಗಳ ಸಂಗ್ರಹಾಲಯ ಪ್ರಾರಂಭಿಸಲು.
  • ಡಾ. ಆರ್.ವಿ. ಭಂಡಾರಿಯವರ ಪುಸ್ತಕಗಳನ್ನು ಪ್ರಕಟಿಸಲು ಮತ್ತು ಅವರ ಬದುಕು ಬರಹದ ಕುರಿತು ಸಂಶೋಧನೆ ನಡೆಸಲು.
  • ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರ, ನಾಟಕೋತ್ಸವ ಹಾಗೂ ನಿದರ್ಿಷ್ಟ ವಿಷಯದ ಕುರಿತು ನಿಗದಿತ ಅವಧಿಯ ಶಾಲೆ ನಡೆಸಲು.
  • ಶಿಕ್ಷಕರಿಗೆ ಹಾಗೂ ಸಾಮೂಹಿಕ ಹೋರಾಟದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ತರಬೇತಿ ಶಿಬಿರ ಏರ್ಪಡಿಸಲು.
  • ಪ್ರಕಾಶನವನ್ನು ಮುದ್ರಣ ಮಾಧ್ಯಮದಿಂದ ಹೊಸ ಶ್ರಾವ್ಯ-ದೃಶ್ಯ ಮಾಧ್ಯಮಗಳಿಗೆ ವಿಸ್ತರಿಸಿ ಬಹುಮಾಧ್ಯಮ ಪ್ರಕಾಶನದ ಸಾಧ್ಯತೆಗಳನ್ನು ಅನ್ವೇಷಿಸಿ ಬೆಳೆಸಲು.
  • ಮಕ್ಕಳ ಕುರಿತು ಪುಸ್ತಕ, ಹಾಡುಗಳ ಮತ್ತು ನಾಟಕಗಳ ಸಿ.ಡಿ. ಬಿಡುಗಡೆ ಮಾಡಲು.
  • ವಯಸ್ಕರ ಶಿಕ್ಷಣ ಸಾಕ್ಷರತಾ ಕಾರ್ಯಕ್ರಮವನ್ನು ರೂಪಿಸಲು ಮತ್ತು ಈ ಉದ್ದೇಶಕ್ಕಾಗಿ ಸೂಕ್ತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು.
  • ಉನ್ನತ ಅಧ್ಯಯನಕ್ಕಾಗಿ, ಕ್ರೀಡಾ ಉನ್ನತಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಬಡ/ದುರ್ಬಲ ವಿದ್ಯಾಥರ್ಿಗಳಿಗೆ ಅಗತ್ಯ ಸಹಾಯಧನ/ಸ್ಕಾಲರ್ಶಿಪ್ ನೀಡಲು.
  • ಸಾರ್ವಜನಿಕರಲ್ಲಿ ಸಮಾಜವಾದಿ ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ, ಶೈಕ್ಷಣಿಕ ಪ್ರಜ್ಞೆ ಹೆಚ್ಚಿಸಲು ಅಗತ್ಯವಾದ ಕರಪತ್ರ, ಕಿರುಪುಸ್ತಕ, ಭಿತ್ತಿಪತ್ರ, ನಿಯತಕಾಲಿಕ, ದಿನಪತ್ರಿಕೆ, ಮ್ಯಾಗಜಿನ್ ಹಾಗೂ ಇಲೆಕ್ಟ್ರಾನಿಕ್ ಮೀಡಿಯಾವನ್ನು ಪ್ರಾರಂಭಿಸಲು.
  • ನಾಡಿನಾದ್ಯಂತ ದತ್ತಿ ಉಪನ್ಯಾಸ, ಪ್ರಚಾರೋಪನ್ಯಾಸ, ಸಂಸ್ಮರಣ ಉಪನ್ಯಾಸ ಏರ್ಪಡಿಸಲು.
  • ದುಡಿಯವ ವರ್ಗ, ರೈತರು, ಯುವಜನರು, ವಿದ್ಯಾಥರ್ಿಗಳು, ಮಹಿಳೆಯರು ಇತರ ದಮನಿತ ವರ್ಗಗಳ ಜನತೆಗೆ ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಹೊಂದಲು ಸೂಕ್ತ ಮಾರ್ಗದರ್ಶನ ಮಾಡಲು.

ನಿಮ್ಮ ಟಿಪ್ಪಣಿ ಬರೆಯಿರಿ